Wednesday, May 13, 2009

ಶಾಪ

ನನ್ನೊಡನೆ ಒರೆಸ ಬೇಡಾ........
ಉರಿದು ಬೂದಿಯಗುತಿಯಾ !
ಬೆಂಕಿ ಕಡ್ಡಿಗೆ ಶಾಪ ಕೊಟ್ಟಿತು
ಬೆಂಕಿ ಪೆಟ್ಟಿಗೆ !!!

ಜಾತಿ

ಪ್ರೇತ ಪರಿಶೋದನೆಯಲ್ಲಿ
ಕಂಡು ಹಿಡಿಯಲಾಗಲಿಲ್ಲ
ಜಾತಿ ಕಲವರದಲ್ಲಿ
ಸತ್ತು ಹೋದ ಆ
ಅನಾಥ ಬಾಲಕ
ಯಾವ ಜಾತಿ ಎಂದು ...............!

ಮಾಲೆ

ಹೂವಿನ ಮಾಲೆ ಮನುಷ್ಯನನ್ನು
ನೋಡಿ ಕೇಳಿತು
ಹಲವು ಜಾತಿಯ ಹೂಗಳನ್ನು ಒಂದಾಗಿ
ಸೇರಿಸಿ ಮಾಲೆ ಮಾಡುವ ಮನುಷ್ಯರುಗಳೇ
ಹಲವು ಜಾತಿಯ ಮನುಷ್ಯರನ್ನು
ಯಾಕೆ ಒಂದಾಗಿ ನೋಡಲು
ಮರೆತು ಬಿಡುತಿಯಾ???????