Sunday, August 23, 2009

" ಕಿಟಿಕಿಯಲ್ಲಿ ನಿಂತವಳಿಗೆ "

ನಿನ್ನ ನೋಟದ ಮೊಲಕ
ಹೃದಯವನ್ನು ಅರಿತೆ.
ನೀನೂ ಅದೇ ತರಹ
ನನ್ನನ್ನು ಅರಿತಿರಬಹುದು
ಎಂದು ಎಣಿಸುವೆ.
ಅದನ್ನು ದ್ರಡ್ ಪಡಿಸಿ ಕೊಳಲೆಂದೇ
ಇದನ್ನು ಬರೆಯುತ್ತಿರುವೆ ..........

Wednesday, August 12, 2009

ಈ ದಿನ

ಗಾಳಿಯೇ ಈ ದಿನ ಮಾತ್ರ
ಬೀಸಬೇಡ
ನನ್ನವಳು ದೀಪ ಏರಿಸುತಿದ್ದಾಳೆ
ಈ ಒಂದು ದಿನ ಆದರೂ
ಬೆಳಕಿರಲಿ
ನನ್ನ ಸಮಾದಿಯ ಮುಂದೆ .........

Sunday, August 9, 2009

ಸ್ನೇಹ

ಹೂಗಳ ಜೊತೆ ಗೆಳೆತನ ಮಾಡ.ಬಯಸಿದೆ
ಮುಂಜಾನೆ ಅರಳಿ ಸಂಜೆ ಬಾಡಿ ಹೋಯಿತು
ಮುಳ್ಳಿನ ಜೊತೆ ಸ್ನೇಹ ಬಯಸಿದೆ
ಚುಚ್ಹಿ ಹೃದಯದಲ್ಲಿ ನೋವಿನ ನೆನಪನ್ನೇ ಕೊಟ್ಟಿತು
ನಿನ್ನ ಜೊತೆ ಸ್ನೇಹ ಮಾಡಿದೆ
ಮನಸನ್ನು ಸದಾ ಅರಳಿಸಿ , ಸಿಹಿ ನೆನಪಿನ
ನೋವನ್ನೇ ಮರುಕಳಿಸಿತು ............

Monday, August 3, 2009

ನೆನಪು

ಈ ಬದುಕಿನಲ್ಲಿ ಭಾವನೆಗಳ
ಮಳೆ ಸುರಿದು ನಿಂತು ಹೋದ
ಮೇಲೆ ತೊಟ್ಟಿಕುವುದು ಬರಿ
ನೆನಪು ಮಾತ್ರ.........
ನಿನ್ನದು ಈಗ ಕೇವಲ
ನೆನಪು ಮಾತ್ರ ಗೆಳೆಯ......

kanasu

ಬೆಳಿಗ್ಗೆ ಎದ್ದು ಲೈಟ್ ಉರಿಸಿದಾಗ
ಜಿರಲೆಯಂತೆ ಓಡಿ
ಮರೆಯಿತು
ಉಳಿದ ಕನಸು.

ನಿಯತ್ತು

ಬೀದಿ ಬದಿಯ ಬಿಕ್ಷೆ ಬೇಡುವವ
ಹಸಿವೆ ತಾಳಲಾರದೆ ಮುರ್ಚಿತನಾದ
ನಡು ದಾರಿಯಲ್ಲಿ ಬಟ್ಟೆ ಬೇರೆಯ
ಪರಿವೆ ಇಲ್ಲದೆ ಬಿದ್ದಿದ
ವೇಗವಾಗಿ ಹೋಗುತ್ತಿರುವ ಜನಗಳ
ಗುಂಪು ನಿಲ್ಲಲು ಸಮಯವಿಲ್ಲದೆ
ಅವನನ್ನು ದಾಟಿ ಹೋದರು......
ಅವನನ್ನೇ ಸುತ್ತಿ ಸುತ್ತಿ ಬರುತ್ತಾ
ಕೂಗುತ್ತ ಇತ್ತು
ಅವನು ಎಂದೋ ಹಾಕಿದ
ಅನ್ನದ ಒಂದು '' ತುತ್ತು''
ಉಂಡ ''ನಿಯತ್ತು'' ಉಳ್ಳ
ನಾಯಿ....................